ನಿಮ್ಮನ್ನು ಆಶ್ಚರ್ಯಗೊಳಿಸುತ್ತೆ ಬಾಳೆ ಹಣ್ಣಿನ ಈ ಉಪಯೋಗಗಳು!

ಬಾಳೆಹಣ್ಣು ಸ್ವಲ್ಪ ಕಳೆತೊಡನೆ ಅದರ ಸಿಪ್ಪೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದರೆ ಹೆಚ್ಚು ಹಣ್ಣಾದರೆ ಅದು ನಿಧಾನವಾಗಿ ಬೂದು ಬಣ್ಣಕ್ಕೆ ತಿರುಗುತ್ತದೆ.

Last Updated : Apr 18, 2019, 12:25 PM IST
ನಿಮ್ಮನ್ನು ಆಶ್ಚರ್ಯಗೊಳಿಸುತ್ತೆ ಬಾಳೆ ಹಣ್ಣಿನ ಈ ಉಪಯೋಗಗಳು! title=
Pic Courtesy@IFAD

ಬಾಳೆಹಣ್ಣು(Banana) ಪೊಟ್ಯಾಸಿಯಂ ಮತ್ತು ವಿಟಮಿನ್ ಗಳ ಮಹಾಸಾಗರ. ಇದಲ್ಲದೆ ಬಾಳೆಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ, ಇದು ನಮ್ಮ ದೇಹಕ್ಕೆ ಬಹಳ ಮುಖ್ಯವಾಗಿದೆ. ಈ ಕಾರಣಕ್ಕಾಗಿಯೇ ನಮ್ಮ ದಿನನಿತ್ಯದ ಆಹಾರದಲ್ಲಿ ಬಾಳೆಹಣ್ಣು ಕೂಡ ಸೇರಿದೆ.

ನೀವೂ ಪ್ರತಿ ದಿನ ಒಂದು ಬಾಳೆಹಣ್ಣನ್ನು ತಿಂದರೆ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ಬಾಳೆಹಣ್ಣಿನಿಂದ ಇನ್ನೂ ಹಲವು ಪ್ರಯೋಜನಗಳಿವೆ. ಇಂದು ವಿಶ್ವ ಬಾಳೆಹಣ್ಣಿನ ದಿನ(World Banana Day). ಈ ವಿಶೇಷ ದಿನದಂದು ಬಾಳೆಹಣ್ಣಿನ ಉಪಯೋಗಗಳ ಬಗ್ಗೆ ನಾವಿಂದು ತಿಳಿಸಲಿದ್ದೇವೆ. 

ವಾಸ್ತವವಾಗಿ, ಬಾಳೆಹಣ್ಣು ಬಣ್ಣವು ಕಂದು ಬಣ್ಣಕ್ಕೆ ತಿರುಗಿದಂತೆ ಅಯ್ಯೋ ಇದು ಕೊಳೆತು ಹೋಗಿದೆ ಎಂದು ನಾವು ಆ ಹಣ್ಣನ್ನು ಎಸೆಯುತ್ತೇವೆ. ಆದರೆ, ಕೊಳೆತ(ಕಳೆತ) ಬಾಳೆ ಹಣ್ಣಿನ ಸೇವನೆ ನಿಮ್ಮನ್ನು ಅನೇಕ ರೋಗಗಳಿಂದ ದೂರ ಇರಿಸುತ್ತದೆ ಅಥವಾ ಹಲವು ರೋಗಗಳಿಗೆ ಈ ಹಣ್ಣು ಮದ್ದು ಎಂದು ನಿಮಗೆ ತಿಳಿದಿದೆಯೇ?

ಬಣ್ಣವನ್ನು ಅವಲಂಬಿಸಿ ನಾಲ್ಕು ಬಣ್ಣಗಳಲ್ಲಿ ಬಾಳೆಹಣ್ಣು ಸಿಗುತ್ತದೆ. ಬಾಳೆಹಣ್ಣು ಹಣ್ಣೋ, ಕಾಯೋ, ಕಳತಿದೆಯೋ ಎಂಬುದನ್ನು ಅದರ ಬಣ್ಣವೇ ತೋರಿಸುತ್ತದೆ. ಬಾಳೆಹಣ್ಣು ಹಸಿ ಬಣ್ಣದ್ದಾಗಿದ್ದರೆ ಅದು ಕಚ್ಚಾ(ಇನ್ನೂ ಕಾಯಿ), ಇದನ್ನು ತರಕಾರಿಯಾಗಿಯೂ ಬಳಸಬಹುದು. ಬಾಳೆಹಣ್ಣು ಸ್ವಲ್ಪ ಮಾಗಿದಂತೆ ಅದು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇನ್ನೂ ಹೆಚ್ಚು ಹಣ್ಣಾದರೆ ಅದು ನಿಧಾನವಾಗಿ ಬೂದು ಬಣ್ಣಕ್ಕೆ ತಿರುಗುತ್ತದೆ. ಇನ್ನೂ ಸ್ವಲ್ವ ಸಮಯ ಕಳೆದರೆ ಅದರ ಸಿಪ್ಪೆ ಸಂಪೂರ್ಣವಾಗಿ ಕಂದು ಬಣ್ಣಕ್ಕೆ ತಿರುಗುತ್ತದೆ. 

(ಫೋಟೋ :@IFAD)

ಇಂದು ವರ್ಲ್ಡ್ ಬನಾನ ಡೇ ಈ ಸಂದರ್ಭದಲ್ಲಿ, ವಿಶ್ವಸಂಸ್ಥೆಯ ಸಂಘಟನೆಯಾದ ಇಂಟರ್ನ್ಯಾಷನಲ್ ಫಂಡ್ ಫಾರ್ ಅಗ್ರಿಕಲ್ಚರ್ ಡೆವಲಪ್ಮೆಂಟ್ (IFAD), ಕಳೆತ ಬಾಳೆಯ ಅದ್ಭುತವಾದ ಗುಣಗಳನ್ನು ಕುರಿತು ತಿಳಿಸಿದೆ. IFAD ಪ್ರಕಾರ, ಕೊಳೆತ/ಕಳೆತ ಬಾಳೆಹಣ್ಣುಗಳು ಬಹಳಷ್ಟು ಟ್ರಿಪ್ಟೊಫಾನ್(Tryptophan) ಅನ್ನು ಒಳಗೊಂಡಿರುತ್ತವೆ. ಇದು ಒತ್ತಡ ಮತ್ತು ಖಿನ್ನತೆಗಳನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಈ ಹಣ್ಣು ಪೋಷಕಾಂಶಗಳ ಆಗರ. ಆದ್ದರಿಂದ, ಕೊಳೆತ ಬಾಳೆಹಣ್ಣುಗಳನ್ನು ಬ್ರೆಡ್ ತಯಾರಿಸಲು ಅಥವಾ ಮಿಲ್ಕ್ಶೇಕ್ ಮಾಡಲು ಬಳಸಲಾಗುತ್ತದೆ.

(ಫೋಟೋ :@IFAD)

ನೀವು ಹಸಿರು ಬಾಳೆಹಣ್ಣುಗಳನ್ನು ತಿನ್ನುತ್ತಿದ್ದರೆ, ಅದು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ. ಇದು ಬಹಳ ನಿಧಾನವಾಗಿ ಜೀರ್ಣವಾಗುತ್ತದೆ, ಏಕೆಂದರೆ ರಕ್ತದ ಗ್ಲುಕೋಸ್ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.

(ಫೋಟೋ :@IFAD)

ಮಾಗಿದ ಬಾಳೆಹಣ್ಣನ್ನು ಉತ್ತಮ ಆಂಟಿ-ಆಕ್ಸಿಡೆಂಟ್ ಎಂದು ಪರಿಗಣಿಸಲಾಗಿದೆ. ಇದು ನಿಮ್ಮ ಚಯಾಪಚಯವನ್ನು ಬಲಗೊಳಿಸುತ್ತದೆ, ಇದು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ಬಹಳ ಸುಲಭವಾಗಿ ಜೀರ್ಣವಾಗುವುದರಿಂದ ಇದನ್ನು ಲಘು ಆಹಾರವಾಗಿ ಬಳಸಬಹುದು.
 

Trending News